ಡಾ. ಎನ್. ಚಿನ್ನಸ್ವಾಮಿ ಸೋಸಲೆ
ಮಿತ್ರದಾರ ಚಿನ್ನಸ್ವಾಮಿ ಸೋಸಲೆ ಅವರು ಮೊದಲಿನಿಂದಲೂ ದಲಿತ ಇತಿಹಾಸವನ್ನು ಬೇರೆಬೇರೆ ನೆಲೆಯಲ್ಲಿ ಪುನಾರಚಿಸುತ್ತಿರುವರಲ್ಲಿ ಒಬ್ಬರು. ಇದಕ್ಕಾಗಿ ಅವರು ಸಾಹಿತ್ಯವನ್ನು ಒಳಗೊಂಡಂತೆ ವೈವಿಧ್ಯಮಯವಾದ ಆಕರಗಳನ್ನು ತುಡುಕುತ್ತ ಬಂದಿದ್ದಾರೆ. ಅವರು ರಚಿಸುತ್ತಿರುವ ಈ ಹೊಸ ಇತಿಹಾಸದಲ್ಲಿ ಅಪಾರ ನೋವುಂಡ ಈಗಲೂ ಉಣ್ಣುತ್ತಿರುವ ದಲಿತರು ತಮ್ಮ ಘನತೆಯ ಬದುಕನ್ನು ಕಟ್ಟಿಕೊಳ್ಳುವುದು ಹೇಗೆಂಬ ಪ್ರಶ್ನೆ ಮುಖ್ಯವಾಗಿದೆ. ಇಲ್ಲಿ ಇತಿಹಾಸ ರಚನೆಯ ಉದ್ದೇಶ ಗತವನ್ನು ಅರಿಯುವುದು ಮಾತ್ರವಲ್ಲ. ವರ್ತಮಾನವನ್ನು ಅರಿಯುವುದು ಹಾಗೂ ಭವಿಷ್ಯವನ್ನು ಕಟ್ಟಿಕೊಳ್ಳುವುದಾಗಿದೆ.